
Bendakalu on Toast
Kannada, 120 min
Age limit: 8+
Written by Girish Karnad
Directed by Surendranath S
Cast
Soundarya Nagaraj
Soumya Bhagawat
Kalpana Naganath
Vijay Kulkarni
Prachi Ravishankar
Sripriya
Shankar Ganesh
Gowri Dattu
Sujit Udupa
Sripathi Manjanabail
Keerthi Bhanu
Indira Pujary
Suraj Kiran
Vasantha Krishnamurthy
Shraddha Raj
Anil
Arun D T
Vaishnavi Swamy
Crew
Sets Design – M S Sathyu
Sets Making – Basavaraj, Anand, Suresh Baganawar
Light – Parthasarathy
Properties – Jutty Satish
Costumes – Anshul Juneja
Sound Engineer – Omkar
Poster Design – S G Vasudev
Production – Arun D T, Anil B
Assistant Director – Venkatesh Prasad
Director – Surendranath S
Synopsis:
Girish Karnad’s ‘Boiled Beans on Toast’, set in Bangalore, revolves around an intersection of characters both wealthy and poor. It speaks of their individual dreams and ambitions, and the complexities of these relationships through the cruelty they inflict on each other.
The title of the play is derived from the legend of Bangalore’s etymology in which an 11th Century king, tired and weary, knocked on the door of a woman who offered him boiled beans. The grateful king named that spot ‘Bendakalooru’, that over the years has become, Bangalore/Bengaluru. The play makes this city its subject – a commentary on its humongous growth over the last few decades and a realistic view of contemporary India.
ರಂಗ ಶಂಕರ ಪ್ರಸ್ತುತಿ
ಗಿರೀಶ್ ಕಾರ್ನಾಡರ ‘ಬೆಂದಕಾಳು ಆನ್ ಟೋಸ್ಟ್’
ನಿರ್ದೇಶನ ಸುರೇಂದ್ರನಾಥ್ ಎಸ್
ಫೆಬ್ರವರಿ ೨೫ರಿಂದ ೨೯.
ಪ್ರತಿ ದಿನ ಸಂಜೆ ೭.೩೦ಕ್ಕೆ
(ಶನಿವಾರ ೩.೩೦ಕ್ಕೆ ಕೂಡಾ)
ನೂರಾ ಐವತ್ತು ರೂಪಾಯಿಗಳು.
ಎಲ್ಲರ ಬೇಳೆಯೂ ಬೇಯುವಂಥ ಬೆಂಗಳೂರಿನ ಕುರಿತು ಗಿರೀಶ ಕಾರ್ನಾಡರು ಬರೆದಿರುವ ಹೊಸ ನಾಟಕ ’ಬೆಂದಕಾಳು ಆನ್ ಟೋಸ್ಟ್’. ಕಾರ್ನಾಡರು ಬೆಂಗಳೂರು ಉದಯವಾದ ಐತಿಹಾಸಿಕ ಕತೆಗೊಂದು ಸಾಲು ಸೇರಿಸಿ, ಅದನ್ನು ಪಾಶ್ಚಾತ್ಯ ಜಗತ್ತಿಗೆ ಸಮೀಕರಿಸಿದ್ದಾರೆ. ಬೇಕ್ಡ್ ಬೀನ್ಸ್ ಆನ್ ಟೋಸ್ಟ್ ಪಾಶ್ಚಾತ್ಯ ಉಪಹಾರದ ಒಂದು ಪ್ರಮುಖ ಅಂಗವಾಗಿದೆ. ಬೆಂಗಳೂರು ಕೂಡ ಹೀಗೆ ಇತಿಹಾಸ ಮತ್ತು ಆಧುನಿಕತೆಯನ್ನು ಬೆಸೆದುಕೊಂಡ ಊರಾ? ಇದು ಮಹಾನಗರವೆಂದು ಕರೆಸಿಕೊಳ್ಳುವ ಕೊಂಪೆಯಾ? ಕೊಂಪೆಯೆಂದು ಪರಿಭಾವಿಸಬಹುದಾದ ಮಹಾನಗರವಾ? ಒಂದು ಊರು ಬೆಳೆದು ದೊಡ್ಡದಾದ ಮಾತ್ರಕ್ಕೆ ಮಹಾನಗರಿ ಆಗುತ್ತದಾ? ಅದರೊಳಗೆ ಸೇರಿಕೊಂಡ ಮಂದಿಯ ಬೇಗುದಿ, ವ್ಯಾಮೋಹ, ವಂಚನೆ, ಒಳಗುದಿ ಇವೆಲ್ಲವನ್ನು ಒಟ್ಟಾಗಿ ಹಿಡಿಯುವುದಕ್ಕೆ ಒಂದು ಕೃತಿಗೆ ಸಾಧ್ಯವಾಗುತ್ತದಾ? ಹೀಗೆ ಪ್ರಶ್ನೆಗಳನ್ನು ಮುಂದಿಟ್ಟುಕೊಂಡೇ ಕಾರ್ನಾಡರ ನಾಟಕ ನಮ್ಮನ್ನು ಒಳಗೊಳ್ಳುತ್ತಾ ಹೋಗುತ್ತದೆ. ಇಪ್ಪತ್ತು ವರ್ಷಗಳಲ್ಲಿ ಬೆಂಗಳೂರು ಬೆಳೆದು ತಾಳಿರುವ ದೈತ್ಯ ಸ್ವರೂಪದ, ಸಮೃದ್ಧವಾದ ನಗರವೊಂದರ ಜನಜಂಗುಳಿಯ ದೈನಂದಿನ ಆಗುಹೋಗುಗಳು ನಾಟಕದಲ್ಲಿ ಮೂಡುತ್ತದೆ. ಬೆಂಗಳೂರಿನ ಸಂದಿಗೊಂದಿಗಳಲ್ಲಿ ಕಾಣಿಸಿಕೊಳ್ಳುವ ಚೈತನ್ಯ, ಅಸ್ವಸ್ಥತೆ ಮತ್ತು ಅರಾಜಕತೆಯನ್ನು ಮಾತುಗಳಲ್ಲಿ, ಕ್ರಿಯೆಗಳಲ್ಲಿ ನಾಟಕ ಹಿಡಿದಿಡುತ್ತದೆ.